ಅಧಿಕ ರಕ್ತಸ್ರಾವದಿಂದ ಪದೇ ಪದೇ ಪ್ಯಾಡ್ನ ಬದಲಾಯಿಸಬೇಕು. ಒಂದು ಗಂಟೆಗೊಮ್ಮೆ ಬದಲಾಯಿಸಬೇಕು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಮೆನೊರ್ಹೇಜಿಯಾ ಎಂದು ಕರೆಯಲಾಗುತ್ತದೆ. ಮುಟ್ಟಿನ ಸಮಯ ಬಂತೆಂದರೆ ಮಹಿಳೆಯರಿಗೆ ಒಂದು ರೀತಿ ಭಯ ಶುರುವಾಗುತ್ತದೆ. ಮುಟ್ಟಾದಾಗ ಆಗುವ ನೋವು ಯಾವ ಶತ್ರುಗೂ ಬೇಡ ಅಂತಾರೆ. ಹೊಟ್ಟೆ, ಸೊಂಟ ವಿಪರೀತವಾಗಿ ನೋವಾಗುತ್ತದೆ. ಹಾಗಂತ ಈ ಅನುಭವ ಎಲ್ಲರಿಗೂ ಆಗಲ್ಲ. ಕೆಲವರಿಗೆ ಮುಟ್ಟಾದಾಗ ಯಾವ ನೋವು ಕಾಣಿಸಿಕೊಳ್ಳಲ್ಲ. ಇನ್ನು ಕೆಲವರಿಗೆ ಎರಡರಿಂದ ಮೂರು ದಿನ ನೋವು