ಬೆಂಗಳೂರು: ಇಂದಿನ ಮಕ್ಕಳಿಗೆ ಟಚ್ ಸ್ಕ್ರೀನ್ ಮೊಬೈಲ್ ಆಪರೇಟ್ ಮಾಡುವುದು, ಅದರಲ್ಲಿ ಗೇಮ್ಸ್ ಆಡುತ್ತಿರುವುದು ಮಾಡಲು ಹೆಚ್ಚು ಇಷ್ಟ. ಆದರೆ ಚಿಕ್ಕ ಮಕ್ಕಳು ಈ ಮೊಬೈಲ್ ಬಳಸುವುದರಿಂದ ಈ ಅಪಾಯ ತಪ್ಪಿದ್ದಲ್ಲ! ಹೆಚ್ಚಾಗಿ ಟಚ್ ಸ್ಕ್ರೀನ್ ಮೊಬೈಲ್ ನಲ್ಲಿ ಕೈಯಾಡಿಸುತ್ತಿರುವ ಮಕ್ಕಳಿಗೆ ಪೆನ್ಸಿಲ್ ಸರಿಯಾದ ರೀತಿಯಲ್ಲಿ ಹಿಡಿಯಲೂ ಕಷ್ಟವಾಗಬಹುದು ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ.ಸದಾ ಮೊಬೈಲ್, ಟ್ಯಾಬ್ ನಂತ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಕೈಯಾಡಿಸುತ್ತಿರುವ ಮಕ್ಕಳ ಬೆರಳುಗಳ ಮಾಂಸಖಂಡಗಳ