ಬೆಂಗಳೂರು: ನಟ ಚಿರಂಜೀವಿ ಸರ್ಜಾ ಸಾವು ಅವರ ಕುಟುಂಬಕ್ಕೆ ಮಾತ್ರವಲ್ಲ, ಅಭಿಮಾನಿಗಳಿಗೂ ನಂಬಿಕೆಯೇ ಬರದಂತೆ ಮಾಡಿದೆ. ಆದರೆ ಈ ಅಕಾಲಿಕ ಸಾವಿನಿಂದ ನಾವು ಕೆಲವು ಪಾಠ ಕಲಿಯಬೇಕಾಗಿದೆ. ಆರೋಗ್ಯವಾಗಿ, ಫಿಟ್ ಆಗಿದ್ದ ಚಿರಂಜೀವಿ ಸರ್ಜಾ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೊಳಗಾಗಿದ್ದು ಅನೇಕರಿಗೆ ಅಚ್ಚರಿಯುಂಟು ಮಾಡಿದೆ. ಬೆಳಿಗ್ಗೆ ಇದ್ದ ವ್ಯಕ್ತಿ ಮಧ್ಯಾಹ್ನದ ವೇಳೆಗೆ ಇಲ್ಲ ಎಂದರೆ ಜೀವನ ಎಷ್ಟು ಅನಿಶ್ಚಿತತೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಒಂದು ಕ್ಷಣವನ್ನೂ ವ್ಯರ್ಥ ಮಾಡಿಕೊಳ್ಳದೇ ಕಳೆಯಬೇಕು.ಹಾಗೆಯೇ ಎರಡನೆಯ