ಈ ಹೊಸ ಅಧ್ಯಯನದಲ್ಲಿ ಇಲಿಗಳನ್ನು ಇ-ಸಿಗರೇಟ್ ಹೊಗೆಗೆ ಒಡ್ಡಿದಾಗ. ಅವುಗಳ ಶ್ವಾಸಕೋಶಕ್ಕೆ ಹಾನಿವುಂಟಾಗಿ ಉಸಿರಾಟದ ಸೋಂಕುಗಳಿಗೆ ಗುರಿಯಾದವು. ಇ-ಸಿಗರೇಟ್ಗಳು ತಂಬಾಕಿನಲ್ಲಿರುವ ಹಾಗೆ ವಿಷಕಾರಿ ರಾಸಾಯನಿಕಗಳನ್ನು ಉತ್ಪಾದಿಸಿ ಶ್ವಾಸಕೋಶಗಳಿಗೆ ಮತ್ತು ರೋಗನಿರೋಧಕ ವ್ಯವಸ್ಥೆಗೆ ಹಾನಿವುಂಟು ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ವೈರಸ್ ಮತ್ತು ಬ್ಯಾಕ್ಟೀರಿಯಾಗಳಿಗೆ ಅವುಗಳ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಕೆಲವು ಪ್ರಾಣಿಗಳು ಸತ್ತವು. ಸಿಗರೇಟ್ಗೆ ಬದಲಿಯಾಗಿ ಸೇದುವ ಇ-ಸಿಗರೇಟ್ ಆವಿಯಲ್ಲಿ ಫ್ರೀ ರ್ಯಾಡಿಕಲ್ ವಿಷಪದಾರ್ಥವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದು, ಸಿಗರೇಟ್