ಬೆಂಗಳೂರು: ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಎರಡು ಮೂರು ದಿನವಾದರೂ ಸರಿಯಾಗಿ ಟಾಯ್ಲೆಟ್ ಗೆ ಹೋಗುವುದಿಲ್ಲ. ಅಮ್ಮಂದಿರಿಗೆ ಇದು ಆತಂಕಕ್ಕೆ ನೂಕುತ್ತದೆ. ತಿಂದ ಊಟ ಸರಿಯಾಗಿ ಜೀರ್ಣ ಆಗದೇ ಇದ್ದಾಗ, ಅಥವಾ ಆಹಾರದ ಸಮಸ್ಯೆಯಿಂದಲೂ ಇದು ಸಂಭವಿಸುತ್ತದೆ. ಇನ್ನು ಕೆಲವು ಮಕ್ಕಳಲ್ಲಿ ಟಾಯ್ಲೆಟ್ ಮಾಡುವಾಗ ನೋವು ಕಾಣಿಸಿಕೊಂಡು, ಅದರಿಂದ ರಕ್ತ ಕೂಡ ಬರುತ್ತದೆ. ದೇಹದಲ್ಲಿನ ಉಷ್ಣತೆಯ ಕಾರಣದಿಂದ ಹೀಗೆ ಆಗುತ್ತದೆ. ಇದಕ್ಕೊಂದು ಪರಿಹಾರವೂ ಇದೆ. ಮನೆಯಲ್ಲಿ ಪ್ರಯತ್ನಿಸಿ ನೋಡಿ.