ಬೆಂಗಳೂರು : ನಮ್ಮ ಹಲ್ಲುಗಳ ಮೇಲೆ ಎನಾಮಿಲ್ ಎಂಬ ಪದರವಿರುತ್ತದೆ. ‘ಹೈಡ್ರಾಕ್ಸೀಫ್ಲೋರೋ ಎಪಟೈಟ್ ‘ ಎಂಬ ಪದಾರ್ಥದಿಂದ ರೂಪುಗೊಂಡಿರುವ ಹಲ್ಲುಗಳ ಎನಾಮಿಲ್ ಮೂಳೆಗಳಿಗಿಂತಲೂ ಗಟ್ಟಿಯಾಗಿರುತ್ತದೆ. ಆಹಾರದಲ್ಲಿರುವ ಬ್ಯಾಕ್ಟೀರಿಯಾಗಳಿಂದ ಎನಾಮಿಲ್ ಕ್ರಮೇಣ ಸವೆದುಹೋಗುತ್ತದೆ. ಇದರಿಂದ ತಂಪಾದ ಅಥವಾ ಬಿಸಿ ಪದಾರ್ಥಗಳು ಹಲ್ಲುಗಳಿಗೆ ಸೋಕಿದಾಗಲೂ ಜುಂ ಎನ್ನುತ್ತದೆ.