ಬೆಂಗಳೂರು: ಸಿಟ್ಟು.. ಯಾರಿಗೆ ತಾನೇ ಬರಲ್ಲ? ಕೆಲವರು ಸಣ್ಣ ಪುಟ್ಟ ವಿಷಯಕ್ಕೂ ಅತಿಯಾಗಿ ಸಿಟ್ಟು ಮಾಡಿಕೊಂಡು ಸಂಬಂಧವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಹಾಗಾದರೆ ಸಿಟ್ಟು ಕಂಟ್ರೋಲ್ ಮಾಡಬೇಕಾದರೆ ಇವುಗಳನ್ನು ಮಾಡಿ ನೋಡಿ. ಮಾತಾಡುವ ಮೊದಲು ಯೋಚಿಸಿ ಮಾತು ಆಡಿದರೆ ಮುತ್ತು, ಒಡೆದರೆ ಹೋಯ್ತು ಅಂತಾರೆ. ಹಾಗಾಗಿ ಯಾರೊಂದಿಗೆ ಏನೇ ಮಾತನಾಡಬೇಕಾದರೂ ಯೋಚಿಸಿ ಮಾತನಾಡಿ. ಎಲ್ಲರೊಂದಿಗೂ ನಾನು ಹೀಗೇ ಮಾತನಾಡುವುದು ಎಂಬ ಉದ್ಧಟತನ ತೋರಬೇಡಿ. ಸಮಯ ಸಂದರ್ಭಕ್ಕೆ ತಕ್ಕಂತೆ ಮಾತು, ವರ್ತನೆ