ಬೆಂಗಳೂರು: 21 ದಿನಗಳ ಕಾಲ ದೇಶವಿಡೀ ಲಾಕ್ ಡೌನ್. ಹೀಗಾಗಿ ಎಲ್ಲೂ ಮನೆಯಿಂದ ಹೊರ ಹೋಗುವಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಏಕಾಂಗಿಯಾಗಿದ್ದರಂತೂ ಮಾನಸಿಕವಾಗಿ ಖಿನ್ನತೆಗೊಳಗಾಗುವುದು ಖಚಿತ. ಖಿನ್ನತೆಗೊಳಗಾಗದಂತೆ ಏನೆಲ್ಲಾ ಮಾಡಬಹುದು?ಮನೆಯೊಳಗೇ ಇದ್ದು ಇದ್ದೂ ಬೇಜಾರಾದರೆ ಜೈಲಿನಲ್ಲಿ ಬಂಧಿಯಾದ ಅನುಭವವಾಗುವುದು ಸಹಜ. ಇದಕ್ಕಾಗಿ ಈ ಸಮಯದಲ್ಲಿ ಆದಷ್ಟು ಸುಮ್ಮನೇ ಕೂರಬೇಡಿ. ಹಾಗೆಯೇ ವಿಪರೀತ ಕೊರೋನಾ ಬಗ್ಗೆಯೇ ಚಿಂತೆ ಮಾಡುತ್ತಿದ್ದರೂ ಮನಸ್ಸು ವಿಪರೀತ ಅತಂಕ್ಕೀಡಾಗುವುದು ಸಹಜ.ಹೀಗಾಗಿ ಆದಷ್ಟು ನಿಮ್ಮ ಪ್ರೀತಿ ಪಾತ್ರರೊಂದಿಗೆ ಫೋನ್ ಮೂಲಕವಾದರೂ