ರಾಜ್ಯದಲ್ಲಿ ಕರೋನಾ ವೈರಸ್ ಶಂಕಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. 76 ವರ್ಷದ ವೃದ್ಧ ಸಾವನ್ನಪ್ಪಿದ್ದು, ಕಲಬುರಗಿಯಿಂದ ಹೈದ್ರಾಬಾದ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ತೆರಳಿದ್ದಾಗ ನಿಧನರಾಗಿದ್ದಾರೆ. ಹೈದರಾಬಾದ್ ಗೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆಗೆ ತೆಗೆದುಕೊಳ್ಳದೇ ಇದ್ದ ಹಿನ್ನೆಲೆಯಲ್ಲಿ ನಿಧನ ಹೊಂದಿದ್ದಾರೆ. ಆ ಬಳಿಕ ಶವವನ್ನು ಕಲಬುರ್ಗಿಗೆ ವಾಪಸ್ ತರಲಾಗಿತ್ತು.ಕೆಮ್ಮು, ಕಫ ಮತ್ತು ಜ್ವರದ ಹಿನ್ನೆಲೆಯಲ್ಲಿ ವೃದ್ಧನ ಗಂಟಲ ದ್ರವ ಸಂಗ್ರಹಿಸಲಾಗಿತ್ತು. ಪರೀಕ್ಷೆಗೆಂದು ಗಂಟಲ ದ್ರವ ಬೆಂಗಳೂರಿಗೆ ಕಳುಹಿಸಲಾಗಿತ್ತು. ವರದಿ ಇಂದು