ಪ್ರಶ್ನೆ: ಪ್ರೀತಿ ಪ್ರಣಯಕ್ಕೆ ಹಾಗೂ ಸುಖ ದಾಂಪತ್ಯಕ್ಕೆ ಯಾವುದೇ ವಯಸ್ಸಿನ ಹಂಗು ಇದೆಯಾ? ನಿರ್ಧಿಷ್ಟ ವಯಸ್ಸು ದಾಟಿದ ಮೇಲೆ ಅಂದರೆ ಐವತ್ತು ವರ್ಷಗಳು ಆದ ಮೇಲೆ ಲೈಂಗಿಕ ಕ್ರಿಯೆ, ರೋಮ್ಯಾನ್ಸ್, ಲವ್ ಮಾಡೋದು ಸರಿನಾ? ತಪ್ಪಾ? . ಉತ್ತರ: ವಯಸ್ಸು ಹೆಚ್ಚಾದಂತೆ ದೈಹಿಕವಾಗಿ ಕೆಲವೊಂದು ಅಡ್ಡಿ ಆಗಬಹುದು ಅಷ್ಟೇ. ಆದರೆ ವಯಸ್ಸಾದ ಗಂಡ-ಹೆಂಡತಿ ನಡುವೆ ಲೈಂಗಿಕ ವಿಚಾರವಾಗಿ ಸಮಾನ ಆಸಕ್ತಿಯಿದ್ದರೆ ಲೈಂಗಿಕ ಕ್ರಿಯೆ ನಡೆಸುವುದರಲ್ಲಿ ತಪ್ಪಿಲ್ಲ.ದೈಹಿಕವಾಗಿ ಬರುವ ಕೆಲವೊಂದು ಅಡ್ಡಿಗಳಿಗೆ ತಜ್ಞ ವೈದ್ಯರ ಬಳಿ ಪರಿಹಾರ ಕಂಡುಕೊಂಡು ಸುಖ ದಾಂಪತ್ಯ ಮುಂದುವರಿಸಬಹುದು.ಹುಣಸೆ ಮರ ಮುಪ್ಪಾದರೆ ಹುಳಿ ಮುಪ್ಪಾಗಲ್ಲ