ಮದುವೆಯಾದ ಮೇಲೆ ನವ ದಂಪತಿಗಳ ನಡುವೆ ಹೊಂದಾಣಿಕೆ ಇದ್ದರೂ ಇಲ್ಲದಿದ್ದರು ಲೈಂಗಿಕ ಜೀವನ ಮಾತ್ರ ಬೊಂಬಾಟ್ ಆಗಿರುತ್ತದೆ. ಆದರೆ ತಿಂಗಳುಗಳು ಉರುಳಿ ವರ್ಷ ಮುಗಿಯುತ್ತಿದ್ದರೂ ಆಕೆ ಗರ್ಭ ಧರಿಸದಿದ್ದರೆ ಅಲ್ಲೇನೋ ಸಮಸ್ಯೆ ಇದೆ ಅಂತ ಭಾವಿಸದೇ ವಿಧಿಯಿಲ್ಲ. ದೀರ್ಘವಾದ ಸಮಯ ಹಾಗೂ ದಿನಗಳವರೆಗೆ ಲೈಂಗಿಕ ಕ್ರಿಯೆ ನಡೆಸಿದರೂ ಗರ್ಭ ಧರಿಸದಿದ್ದಾಗ ಕೂಡಲೇ ಮಹಿಳಾ ತಜ್ಞ ವೈದ್ಯರು ಹಾಗೂ ಲೈಂಗಿಕ ತಜ್ಞರನ್ನು ಭೇಟಿ ಮಾಡಿ ತಡಮಾಡದೇ ಸಲಹೆ, ಚಿಕಿತ್ಸೆ ಪಡೆದುಕೊಳ್ಳಬೇಕು.