ಪ್ರಶ್ನೆ: ನಾನು 33 ವರ್ಷದ ಗೃಹಸ್ಥ. ನನ್ನ ವಿರುದ್ಧ ಗರಂ ಆದ ಹಳೇ ಪ್ರೇಯಸಿ ಮನೆಯವರು ಯಾರಿಗೂ ತಿಳಿಯದಂತೆ ನನ್ನ ಪ್ರೇಯಸಿಯನ್ನು ಬೇರೆ ಹುಡುಗನಿಗೆ ಕೊಟ್ಟು ಮದುವೆ ಮಾಡಿಬಿಟ್ರು. ಇದಾಗಿ ಐದು ವರ್ಷಗಳೇ ಕಳೆಯುತ್ತಿವೆ. ಆಕೆಗೆ ಈಗ ಮಗು ಆಗಿಲ್ಲ. ಹೀಗಾಗಿ ನನ್ನ ಮಗುವಿಗೆ ನಿನೇ ತಂದೆಯಾಗು ಅಂತೆಲ್ಲ ಈಗ ಬೆನ್ನು ಹತ್ತಿದ್ದಾಳೆ. ಉತ್ತರ: ನೀವು ಯೌವನದಲ್ಲಿ ಪರಸ್ಪರ ಆಕರ್ಷಣೆಗೆ ಒಳಗಾಗಿ ವಯೋಸಹಜವಾಗಿ ಪ್ರೀತಿ ಮಾಡಿರಬಹುದು. ಅಥವಾ ನಿಮ್ಮದು ನಿಜವಾದ ಪ್ರೀತಿಯೇ ಆಗಿರಬಹುದು.