Widgets Magazine

ಆಕೆಯಿಂದ ಹಣ ಪಡೆದವ ಒಬ್ಬ ; ದೇಹ ಸುಖ ಪಡೆದವ ಮತ್ತೊಬ್ಬ

love
ಬೆಂಗಳೂರು| JK| Last Modified ಬುಧವಾರ, 25 ಮಾರ್ಚ್ 2020 (17:21 IST)
ಪ್ರಶ್ನೆ: ಸರ್, ನನ್ನ ಗೆಳೆಯ ಗೃಹಿಣಿಯೊಬ್ಬಳ ಹತ್ತಿರ ಸಾಲವಾಗಿ ಹಣ ಪಡೆದಿದ್ದನು. ಅದನ್ನು ಆಕೆಗೆ ಮರಳಿ ಕೊಟ್ಟಿಲ್ಲ. ಹೀಗಾಗಿ ಆ ಮಹಿಳೆ ನನ್ನ ಬಳಿ ಬಂದು ಹಣ ದೊರಕಿಸಿಕೊಡುವ ಹಾಗೆ ವಿನಂತಿಸಿದಳು. ಹಣದ ನೆಪ ಮಾಡಿಕೊಂಡು ಆಗಾಗ್ಗೆ ನನ್ನ ಮನೆಗೆ ಬರತೊಡಗಿದಳು. ಒಂದಷ್ಟು ಹಣ ನನ್ನಗೆಳೆಯ ವಾಪಸ್ ಮರಳಿಸಿದನು.

ಆದರೆ ಈ ವೇಳೆಗಾಗಲೇ ಆ ಮಹಿಳೆ ನನ್ನ ಜೊತೆ ಲವ್ ಮಾಡುತ್ತಿದ್ದಳು. ನಾವಿಬ್ಬರೂ ಲೈಂಗಿಕ ಸಂಪರ್ಕವನ್ನೂ ಹೊಂದಿದ್ದೇವೆ. ಕಳೆದೊಂದು ವರ್ಷದಿಂದ ಆಕೆ ನನ್ನ ಜತೆ ಮಲಗುತ್ತಿದ್ದಾಳೆ. ನನಗೆ ಮದುವೆಯಾಗಿಲ್ಲ. ಆದರೆ ಅವಳು ಮದುವೆಯಾಗಿ ಗಂಡ ಬಿಟ್ಟವಳು. ಈಗ ನನಗೆ ಜೀವನ ಕೊಡು ಅಂತ ಕೇಳುತ್ತಿದ್ದಾಳೆ. ಪರಿಹಾರ ತಿಳಿಸಿ.

ಉತ್ತರ: ಕಾಮಾತುರಾಣಂ ನ ಭಯಂ ನ ಲಜ್ಜಾ ಅನ್ನೋದು ಇದಕ್ಕೆ. ಕಾಮಕ್ಕೆ ಕಣ್ಣಿಲ್ಲ ಎಂದು ಹಿರಿಯರು ಹೇಳಿದ್ದಾರೆ. ನೀವು ಹಣದ ವಿಷಯದಲ್ಲಿ ಸಹಾಯ ಮಾಡಲು ಹೋಗಿ ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದು ತಪ್ಪು. ಪರಿಚಯವಿಲ್ಲದ ಆಕೆಯೊಂದಿಗೆ ವರ್ಷದಿಂದ ಸಂಭೋಗ ನಡೆಸುತ್ತಿರುವುದು ಎರಡನೇ ತಪ್ಪು. ನೀವಿನ್ನೂ ಅವಿವಾಹಿತ ಅಂತ ಹೇಳಿದ್ದೀರಿ.

ಆದರೆ ಆಕೆಯ ವಯಸ್ಸನ್ನೂ ನೀವು ತಿಳಿಸಿಲ್ಲ. ಇರಲಿ, ಆಕೆ ನಿಮ್ಮ ದೇಹವನ್ನು ಈಗಾಗಲೇ ಹಂಚಿಕೊಂಡಿದ್ದಾಳೆ. ಅವಳು ನಿಮಗೆ ಇಷ್ಟವಾಗಿದ್ದಲ್ಲಿ ಅವಳನ್ನು ಮದುವೆಯಾಗಿ ಬಾಳು ಕೊಡಿ. ಇಲ್ಲವೇ ಆಕೆಯೊಂದಿಗೆ ಕೇವಲ ಸಂಭೋಗಕ್ಕಾಗಿ ನೀವು ಜತೆಗಿದ್ದರೆ ಕೂಡಲೇ ಆಕೆಯ ಸಹವಾಸದಿಂದ ಶೀಘ್ರ ಹೊರಬನ್ನಿ. ಅನೈತಿಕ ಸಂಬಂಧ ಹಲವು ಅನಾಹುತಗಳಿಗೆ ಕಾರಣವಾಗಬಹುದು.




ಇದರಲ್ಲಿ ಇನ್ನಷ್ಟು ಓದಿ :