ಬೆಂಗಳೂರು: ಮಾರಕ ಕೊರೋನಾ ರೋಗ ಹರಡದಂತೆ ತಡೆಯಲು ವಿಶ್ವ ಆರೋಗ್ಯ ಸಂಸ್ಥೆಯೇನೋ 20 ಸೆಕೆಂಡುಗಳ ಕೈ ತೊಳೆಯುವ ವಿಧಾನವನ್ನು ಸೂಚಿಸಿದೆ. ಆದರೆ ಹೀಗೆ ಮಾಡುವುದರಿಂದಲೂ ಕೈ ಸಂಪೂರ್ಣವಾಗಿ ಶುಚಿಯಾಗದು. ಅದಕ್ಕೆ ಕಾರಣ ನಿಮ್ಮ ಉಗುರು! ಹೌದು. ಕೊರೋನಾ ವ್ಯಾಪಕವಾಗಿರುವ ಈ ಸಂದರ್ಭದಲ್ಲಿ ಉದ್ದ ಉಗುರು ಇದ್ದರೆ ಡೇಂಜರ್! ನಿಮ್ಮ ಉಗುರಿನಿಂದಲೇ ಹಲವು ರೋಗಗಳು ಹರಡುವುದು. ಉಗುರಿನ ನಡುವೆ ಕೊಳೆ, ವೈರಾಣು ಸಿಲುಕಿಕೊಂಡಿರುತ್ತದೆ.20 ನಿಮಿಷ ಹ್ಯಾಂಡ್ ವಾಶ್ ಮಾಡಿದರೂ ಉದ್ದ ಉಗುರು