ರುಚಿಕರವಾದ ಹಾಲು ಕಡುಬು

ಬೆಂಗಳೂರು| pavithra| Last Modified ಬುಧವಾರ, 15 ಜುಲೈ 2020 (13:18 IST)
ಬೆಂಗಳೂರು : ಹಾಲಿನಿಂದ ಹಲವು ತಿಂಡಿಗಳನ್ನು ಮಾಡಬಹುದು. ಅದು ತುಂಬಾ ರುಚಿಯಾಗಿರುತ್ತದೆ. ಅದೇರೀತಿ ಹಾಲಿನಿಂದ ಕಡುಬನ್ನು ಕೂಡ ತಯಾರಿಸಬಹುದು.
ಬೇಕಾಗುವ ಸಾಮಾಗ್ರಿಗಳು : ಹಾಲು 2 ಕಪ್, ನೀರು 1 ಕಪ್, ಗೋದಿ ಹಿಟ್ಟು 1 ಕಪ್, ಅಕ್ಕಿ ಹಿಟ್ಟು 1 ಕಪ್, ಬೆಲ್ಲದ ಪುಡಿ 1 ಕಪ್, 1ಕಪ್, ಏಲಕ್ಕಿ 2, ಜಾಯಿಕಾಯಿ ಪುಡಿ 1 ಚಿಟಿಕೆ, ಗಸೆಗಸೆ 1 ಚಮಚ.> > ಮಾಡುವ ವಿಧಾನ :  ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಅಕ್ಕಿ ಹಿಟ್ಟು ಮತ್ತು ಗೋದಿ ಹಿಟ್ಟನ್ನು ಹಾಕಿ ಹುರಿಯಿರಿ. ಬಳಿಕ ನೀರು ಮತ್ತು ಹಾಲನ್ನು ಸೇರಿಸಿ ಚೆನ್ನಾಗಿ ಕುದಿಸಿ ಅದಕ್ಕೆ ಹುರಿದ ಹಿಟ್ಟನ್ನು ಹಾಕಿ ತಿರುಗಿಸಿ. ಅದಕ್ಕೆ ಬೆಲ್ಲದ ಪುಡಿ, ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮಿಶ್ರಣ ಗಟ್ಟಿಯಾದ ಮೇಲೆ ಒಲೆಯಿಂದ ಕೆಳಗಿಳಿಸಿ ಜಾಯಿ ಕಾಯಿ ಪುಡಿ ಮಿಕ್ಸ್ ಮಾಡಿ ಒಂದು ತುಪ್ಪ ಸವರಿದ ಪಾತ್ರೆಗೆ ಈ ಮಿಶ್ರಣವನ್ನು ಸುರಿಯಿರಿ. ಅದರ ಮೇಲೆ ಗಸೆಗಸೆ ಹಾಕಿ ಕತ್ತರಿಸಿ.


ಇದರಲ್ಲಿ ಇನ್ನಷ್ಟು ಓದಿ :