ಭಾರತದಲ್ಲಿ ಬೆಳಗಿನ ಉಪಹಾರಕ್ಕಾಗಿ ಮಾಡುವ ಜನಪ್ರಿಯ ತಿಂಡಿಗಳಲ್ಲಿ ದೋಸೆಯೂ ಸಹ ಒಂದು. ಇದು ಬೆಳಗಿನ ತಿಂಡಿಗೂ ಸೂಕ್ತ, ಸಂಜೆಯ ತಿಂಡಿಗೂ ಹೊಂದುತ್ತದೆ. ದೋಸೆ ದಕ್ಷಿಣ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದ್ದು, ಹೋಟೆಲ್ಗಳಿಗೆ ಹೋದರೆ ಮಸಾಲಾ ದೋಸೆ, ಬೆಣ್ಣೆ ದೋಸೆ, ತುಪ್ಪದ ದೋಸೆ, ರಾಗಿ ದೋಸೆ, ಉತ್ತಪ್ಪ, ಪ್ಲೇನ್ ದೋಸೆ ಹೀಗೆ ದೋಸೆಗಳ ದೊಡ್ಡ ಪಟ್ಟಿಯೇ ಸಿಗುತ್ತದೆ. ಇತ್ತೀಚೆಗೆ ಪಾವ್ ಬಾಜಿ ಮಸಾಲಾ ದೋಸೆಯೂ ಸಹ ಹಲವೆಡೆ ಅಂಗಡಿಗಳಲ್ಲಿ ಸಿಗುತ್ತದೆ. ಇದು ಸಂಜೆಯ ತಿಂಡಿಗೆ ಹೆಚ್ಚು ಸೂಕ್ತವಾದ ತಿಂಡಿಯಾಗಿದೆ. ಇದನ್ನು ನೀವು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿಕೊಳ್ಳಬಹುದಾಗಿದೆ.