ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಜ್ವರ ಹೆಚ್ಚಾಗುತ್ತಿದೆ. ಪ್ರತಿದಿನ ಕನಿಷ್ಠ ಮೂರು ಪ್ರಕರಣಗಳಲ್ಲಿ ಡೆಂಗ್ಯೂ ಜ್ವರ ಇರುವುದು ಪತ್ತೆಯಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿಅಂಶಗಳ ಪ್ರಕಾರ ಕಳೆದ 30 ದಿನಗಳಲ್ಲಿ ಡೆಂಗ್ಯೂ ಇರುವ ಹೊಸ 82 ಪ್ರಕರಣಗಳು ದಾಖಲಾಗಿವೆ. ಮೇ 23 ರ ವೇಳೆಗೆ ಕೇವಲ 44 ಡೆಂಗ್ಯೂ ಜ್ವರ ಪ್ರಕರಣಗಳು ದಾಖಲಾಗಿದ್ದರೆ, ಜೂನ್ 22 ರ ವೇಳೆಗೆ ಈ ಸಂಖ್ಯೆ 126 ಕ್ಕೆ ಏರಿಕೆ