ಬೆಂಗಳೂರು: ದಿನ ನಿತ್ಯದ ಜಂಜಾಟದಲ್ಲಿ ಹಲವು ವಿಷಯಗಳ ಬಗ್ಗೆ ನಾವು ತಲೆ ಓಡಿಸಬೇಕು. ಕಚೇರಿಯಲ್ಲಿ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಬೇಕು. ಮನೆಯಲ್ಲಿ ಶಾಂತ ಮೂರ್ತಿಯಾಗಿರಬೇಕು. ನಗು ನಗುತ್ತಾ ಇರಬೇಕು. ಇದೆಲ್ಲದಕ್ಕೂ ಒಂದೇ ಪರಿಹಾರ. ಅದೇನದು?ದೈಹಿಕ ವ್ಯಾಯಾಮ. ಪ್ರತೀ ದಿನ ದೈಹಿಕ ವ್ಯಾಯಾಮ ಮಾಡುತ್ತಿದ್ದರೆ ಎಲ್ಲಾ ಉಲ್ಲಾಸ ಮೂಡಿ ಬುದ್ಧಿಯೂ ಚುರುಕಾಗಿ ಕೆಲಸ ಮಾಡುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ವ್ಯಾಯಾಮವೆಂದರೆ ಪದ್ಮಾಸನ ಹಾಕಿ ಕುಳಿತು ಕೈ ಕಾಲು ಮೇಲಕ್ಕೆತ್ತಿ ಸರ್ಕಸ್ ಮಾಡಬೇಕೆಂದೇನಿಲ್ಲ.ಪ್ರತೀ