ಬೆಂಗಳೂರು : ನೆಲಗಡಲೆ ತಿಂದ ನಂತರ ನಮ್ಮ ಹಿರಿಯರು ನೀರು ಕುಡಿಯಬಾರದು ಎಂದು ಹೇಳುತ್ತಾರೆ. ಇದು ನಿಜವೇ? ಹಿರಿಯರು ಈ ರೀತಿ ಹೇಳಲು ಕಾರಣವೇನು? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ? ಎಂಬುದನ್ನು ಮೊದಲು ತಿಳಿಯೋಣ ಎಣ್ಣೆಯಂಶ ಹೊಂದಿರುವ ಯಾವುದೇ ಆಹಾರವನ್ನು ಸೇವಿಸಿದ ನಂತರ ತಣ್ಣಗಿನ ನೀರು ಅಥವಾ ತಣ್ಣಗಿನ ಯಾವುದೇ ಪಾನೀಯ ಸೇವಿಸಿದರೆ ಅದರಲ್ಲಿರುವ ಕೊಬ್ಬಿನಂಶ ನಮ್ಮ ಆಹಾರದ ನಾಳದಲ್ಲಿ ಉಳಿದುಬಿಡುತ್ತದೆ. ಹೀಗಾಗಿ ಗಂಟಲಿನಲ್ಲಿ ಕಿರಿಕಿರಿಯುಂಟಾಗಿ ಕೆಮ್ಮು ಪ್ರಾರಂಭವಾಗುತ್ತದೆ