ಬೆಂಗಳೂರು: ಮದುವೆ ಊಟ ಎಂದರೆ ನಾಲಿಗೆ ಕೇಳಲ್ಲ. ಉಣಬಡಿಸಿದ್ದನ್ನೆಲ್ಲಾ ಹೊಟ್ಟೆ ತುಂಬಾ ಉಣ್ಣುತ್ತೇವೆ. ಆದರೆ ನಂತರ ಹೊಟ್ಟೆ ಹಿಡಿದುಕೊಂಡು ಕೂರಬೇಕಾದ ಪರಿಸ್ಥಿತಿ ಬಂದರೆ ಏನು ಮಾಡಬೇಕು? ವಾಂತಿ ಮಾಡಿ! ಏನೇನೂ ಮಾಡಿದರೂ ಹೊಟ್ಟೆ ಕೇಳದಿದ್ದಾಗ ವಾಂತಿ ಮಾಡಿಬಿಡುವುದೇ ಒಳ್ಳೆಯದು. ಇದರಿಂದ ಹೊಟ್ಟೆಗೂ ಸಮಾಧಾನ. ನಿಮಗೂ ಆರಾಮ.ಆದಷ್ಟು ಪಾನೀಯ ಸೇವನೆ ಮಾಡಿ ಆದಷ್ಟು ನಿಮ್ಮ ಶರೀರವನ್ನು ನಿರ್ಜಲೀಕರಣಕ್ಕೊಳಗಾಗದಂತೆ ನೋಡಿಕೊಳ್ಳಿ. ಹದ ಬಿಸಿ ನೀರಿಗೆ ಸ್ವಲ್ಪ ನಿಂಬೆ ರಸ ಸೇರಿಸಿಕೊಂಡು ಆಗಾಗ