ಬೆಂಗಳೂರು: ಸಾಮಾನ್ಯವಾಗಿ ಮೂಗಿನ ಮೇಲೆ ಅಥವಾ ಅದರ ಅಕ್ಕಪಕ್ಕದ ಚರ್ಮಗಳಲ್ಲಿ ಕಪ್ಪು ಕಲೆಗಳು ಕಂಡುಬರುತ್ತದೆ. ಎಣ್ಣೆ ಚರ್ಮದವರಿಗೆ ಈ ಸಮಸ್ಯೆ ಅತಿ ಹೆಚ್ಚಾಗಿ ಕಾಡುತ್ತದೆ. ಎಷ್ಟೇ ತೊಳೆದರೂ ಸುಲಭವಾಗಿ ಹೋಗದ ಈ ಚುಕ್ಕೆಗಳು ಕ್ರಮೇಣ ಚರ್ಮದ ಆಳಕ್ಕೆ ಇಳಿಯುತ್ತವೆ. ಇದು ಮೂಖದ ಚರ್ಮದ ರಂಧ್ರದಲ್ಲಿ ತುಂಬಿರುವ ಕೊಳೆ. ಇದನ್ನು ಮನೆಯಲ್ಲೇ ಕೆಲವು ಮಸಾಜ್ ಗಳಿಂದ ಹೋಗಲಾಡಿಸಬಹುದು.