ಬೆಂಗಳೂರು|
pavithra|
Last Modified ಗುರುವಾರ, 1 ಏಪ್ರಿಲ್ 2021 (06:35 IST)
ಬೆಂಗಳೂರು : ಬೇಸಿಗೆಯಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಅತಿಯಾಗಿ ಬೆವರು ಬರುತ್ತದೆ. ಆದರೆ ಕೆಲವರಿಗೆ ಎಲ್ಲಾ ಸಮಯದಲ್ಲೂ ಅತಿಯಾಗಿ ಬೆವರು ಸುರಿಯುತ್ತಿರುತ್ತದೆ. ಅಂತವರು ಆ ಬೆವರಿಗೆ ಕಾರಣವೇನು ಎಂದು ತಿಳಿದು ಅದನ್ನು ಪರಿಹರಿಸಿಕೊಳ್ಳಿ.
ಹೈಪರ್ಹೈಡ್ರೋಸಿಸ್ ನಿಂದ ಬಳಲುತ್ತಿರುವ ಜನರಲ್ಲಿ ಬೆವರು ಗ್ರಂಥಿಗಳು ಹೆಚ್ಚು ಸಕ್ರಿಯವಾಗುತ್ತದೆ. ಇದು ಅತಿಯಾದ ಬೆವರಿಗೆ ಕಾರಣವಾಗುತ್ತದೆ. ದೇಹದಲ್ಲಿ ಬ್ಯಾಕ್ಟೀರಿಯಾ ಸೋಂಕು ಇದ್ದಾಗ, ಹೃದಯದ ಕವಾಟ ಊದಿಕೊಂಡಾಗ, ಮೂಳೆಗಳಿಗೆ ಸಂಬಂಧಿಸಿದ ಸೋಂಕುಗಳಿದ್ದಾಗ, ಹೆಚ್ಚಿನ ತೂಕವಿದ್ದಾಗ ಅತಿಯಾಗಿ ಬೆವರುತ್ತೇವೆ.
ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಆಹಾರದಲ್ಲಿ ಅತಿಯಾಗಿ ಉಪ್ಪನ್ನು ಸೇವಿಸುವುದು ಮತ್ತು ಆಲ್ಕೋಹಾಲ್ ಸೇವನೆ ಕಡಿಮೆ ಮಾಡಿ. ಟೊಮೆಟೊ ಜ್ಯೂಸ್, ಗ್ರೀನ್ ಟೀ, ಮತ್ತು ಗೋಧಿಗಳನ್ನು ಹೆಚ್ಚು ಸೇವಿಸಿ, ಬೇಸಿಗೆಯಲ್ಲಿ ಸಾಕಷ್ಟು ನೀರನ್ನು ಕುಡಿಯಿರಿ. ಎಣ್ಣೆಯುಕ್ತ ಆಹಾರಗಳಿಂದ ದೂರವಿರಿ. ಹತ್ತಿಯ ಬಟ್ಟೆಗಳನ್ನು ಹೆಚ್ಚಾಗಿ ಧರಿಸಿ. ನಿಂಬೆ ಪಾನಕ ಕುಡಿಯಿರಿ.