ಬೆಂಗಳೂರು : ಕೆಲವರು ಸುಂದರವಾಗಿ ಕಾಣಬೇಕೆಂದು ಸೌಂದರ್ಯವರ್ಧಕಗಳನ್ನು ಬಳಸಿಕೊಂಡು ಮೇಕಪ್ ಮಾಡಿಕೊಳ್ಳುತ್ತಾರೆ. ಆದರೆ ಇದು ಶಾಶ್ವತವಾಗಿರಲ್ಲ. ಮೇಕಪ್ ಮಾಡದೆ ನಿಮ್ಮ ಸೌಂದರ್ಯ ಹೆಚ್ಚಿಸಲು ಈ ಸಲಹೆಗಳನ್ನು ಪಾಲಿಸಿ. * ನಿಮ್ಮ ತ್ವಚೆಯನ್ನು ಯಾವಾಗಲು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುವುದು ಮುಖ್ಯ. ನಿರ್ಜಲೀಕರಣದ ಚರ್ಮವು ನಿಮ್ಮ ತ್ವಚೆಯನ್ನು ಶುಷ್ಕವಾಗಿ ಕಾಣುವಂತೆ ಮಾಡುವುದು. ನಿಮ್ಮ ತ್ವಚೆಯನ್ನು ತೇವಾಂಶದಿಂದ ನೋಡಿಕೊಳ್ಳುವುದರಿಂದ, ಚರ್ಮ ನಯವಾಗಿರುತ್ತದೆ. * ನಿಮ್ಮ ದೇಹಕ್ಕೆ ಆರೋಗ್ಯಕರ ಆಹಾರ ನೀಡಿದಷ್ಟು, ನಿಮ್ಮ ಚರ್ಮ ಆರೋಗ್ಯಕರವಾಗಿರುತ್ತದೆ.