ಬೆಂಗಳೂರು : ಸಾಮಾನ್ಯವಾಗಿ ಹೆರಿಗೆ ನಂತರ ನಮ್ಮ ಚರ್ಮಗಳು ಲೂಸ್ ಆಗುತ್ತವೆ. ಇದರಿಂದ ನಿಮ್ಮ ದೇಹದ ಅಂದ ಕೆಡುತ್ತದೆ. ಈ ಲೂಸ್ ಆದ ಚರ್ಮ ಟೈಟ್ ಆಗಲು ಎಣ್ಣೆ ಮಸಾಜ್ ಮಾಡಿ. ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿಕೊಂಡು ನಂತರ ಲೂಸ್ ಆಗಿರುವ ಚರ್ಮಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ರಕ್ತಸಂಚಾರ ಸರಾಗವಾಗಿ ಆಗಲು ಸಹಾಯವಾಗುತ್ತದೆ. ಇದರಿಂದ ಚರ್ಮ ಆರೋಗ್ಯವಾಗಿರುತ್ತದೆ ಮತ್ತು ಮೃದುವಾಗುತ್ತದೆ. ಬಳಿಕ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ.