ಬೆಂಗಳೂರು: ಬೇಸಿಗೆಯ ಬೇಗೆ ಈಗಾಗಲೇ ನಮ್ಮನ್ನು ತಟ್ಟುತ್ತಿದೆ. ಈ ಬೇಸಿಗೆಯಲ್ಲೂ ಸುಂದರ ತ್ವಚೆ ಉಳಿಸಿಕೊಳ್ಳಬೇಕಾದರೆ ಈ ಕೆಲವು ಟಿಪ್ಸ್ ಫಾಲೋ ಮಾಡಿ. ಗಂಟೆ ನೋಡಿಕೊಳ್ಳಿ: ಸೂರ್ಯ ನೆತ್ತಿಗೇರಿದ ಹೊತ್ತು ಆದಷ್ಟು ಹೊರಗಡೆ ಸುತ್ತಾಡುವುದನ್ನು ತಪ್ಪಿಸಿ. ಏನೇ ಕೆಲಸವಿದ್ದರೂ, ಬಿಸಿಲು ಕಡಿಮೆಯಿರುವಾಗ ಮಾಡಿಕೊಳ್ಳಿ.ಸರಿಯಾದ ಉಡುಪು: ಒಂದು ವೇಳೆ ಅನಿವಾರ್ಯವಾಗಿ ಹೊರಗಡೆ ಹೋಗುವುದಿದ್ದರೂ, ಸರಿಯಾದ ಉಡುಪು ಧರಿಸಿ. ಹೆಚ್ಚು ದಪ್ಪನೆಯ, ಹೊರಾವರಣವಿರುವ ಉಡುಪು ಧರಿಸಬೇಡಿ. ಸನ್ ಗ್ಲಾಸ್, ಕ್ಯಾಪ್ ಬಳಸಿ.ಹೊರಗಡೆ ಹೋಗುವಾಗ