ಬೆಳಿಗ್ಗೆ ಎದ್ದಾಗ ಪದೇ ಪದೇ ಸೀನು ಬರುತ್ತಿದೆಯೇ? ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಸೇವಿಸಿ

ಬೆಂಗಳೂರು| pavithra| Last Modified ಗುರುವಾರ, 8 ಏಪ್ರಿಲ್ 2021 (07:43 IST)
ಬೆಂಗಳೂರು : ವಾತಾವರಣ ಬದಲಾದಂತೆ ಜನರು ಕಾಯಿಲೆಗೆ ಬಳುವುದು ಸಹಜ. ಸಾಮಾನ್ಯವಾಗಿ ಶೀತ, ಕಫ, ಜ್ವರದಂತಹ ಸಮಸ್ಯೆ ಕಾಡುತ್ತದೆ. ಆದರೆ ಕೆಲವರಿಗೆ ಪ್ರತಿದಿನ ಬೆಳಿಗ್ಗೆ ಎದ್ದಾಗ ಸೀನು ಬರುತ್ತಿರುತ್ತದೆ. ಈ ಸಮಸ್ಯೆಗೆ ಇಲ್ಲಿದೆ ಮನೆಮದ್ದು.

ಸಾಮಾನ್ಯವಾಗಿ ಶೀತವಾಗುವ ಮುನ್ನ ಸೀನು ಬರುತ್ತದೆ. ಇಲ್ಲವಾದರೆ ಮೂಗಿಗೆ ಧೂಳು ಹೋದಾಗ ಅಲರ್ಜಿಯಾಗಿ ಸೀನು ಬರುತ್ತಿರುತ್ತದೆ. ಕೆಲವರು ತುಂಬಾ ಸೂಕ್ಷ್ಮ ದೇಹ ಸ್ಥಿತಿಯನ್ನು ಹೊಂದಿರುವುದರಿಂದ ಅವರಿಗೆ ಬೆಳಿಗ್ಗೆ ಎದ್ದ ತಕ್ಷಣ ಸೀನು ಬರಲು ಶುರುವಾಗುತ್ತದೆ. ಇದು ಬೇರೆಯವರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ.

ನೀವು ತಂಪಾದ ವಸ್ತುಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಬಿಸಿಯಾದ ಆಹಾರ ಪದಾರ್ಥಗಳನ್ನು ಸೇವಿಸಿ. ಉಗುರುಬೆಚ್ಚಗಿನ ನೀರಿಗೆ 1 ಚಿಟಿಕೆ ಮಿಕ್ಸ್ ಮಾಡಿ ದಿನಕ್ಕೆ 2 ಬಾರಿ ಕುಡಿಯಿರಿ. ಹುಳಿ, ಸಿಹಿ ಮತ್ತು ಎಣ‍್ಣೆಯುಕ್ತ ವಸ್ತುಗಳನ್ನು ಸೇವಿಸಬೇಡಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿಗೆ ಅರಶಿನ ಮತ್ತು ಸೆಲರಿ ಮತ್ತು ಅಳಲೇಕಾಯಿ ಪುಡಿಯನ್ನು ಮಿಕ್ಸ್ ಮಾಡಿ ಕುದಿಸಿ ಆ ನೀರನ್ನು ಕುಡಿದರೆ ಈ ಸಮಸ್ಯೆ ದೂರವಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :