ನೆಗಡಿ ಬಂದರೆ ಸಾಕು ತಕ್ಷಣವೇ ಕೆಮ್ಮು ಬಂದು ಬಿಡುತ್ತೆ. ಕೆಮ್ಮಿನಿಂದ ರಾತ್ರಿಯೆಲ್ಲಾ ನಿದ್ದೆಇಲ್ಲದೇ ಪರಿತಪಿಸಬೇಕಾಗುತ್ತದೆ. ಮುಖ್ಯವಾಗಿ ಕೆಮ್ಮು ದೇಹದಿಂದ ಉದ್ರೇಕಕಾರಿಗಳು ಮತ್ತು ಸೋಂಕುಗಳನ್ನು ತೆರವುಗೊಳಿಸುವಲ್ಲಿ ಪಾತ್ರವಹಿಸುತ್ತದೆ. ಆದರೆ ನಿರಂತರ ಕೆಮ್ಮು ಕಿರಿಕಿರಿ ಉಂಟು ಮಾಡದೇ ಇರದು. ಜೇನು ತುಪ್ಪದಲ್ಲಿನ ಆಂಟಿ ಬ್ಯಾಕ್ಟೀರಿಯಾ ಗುಣವು ಕೆಮ್ಮನ್ನು ಪರಿಣಾಮಕಾರಿಯಾಗಿ ಶಮನ ಮಾಡಲು ಸಹಾಯ ಮಾಡುತ್ತದೆ. ಜೇನುತುಪ್ಪವು ಕೆಮ್ಮಿಗೆ ರಾಮಬಾಣ ಎಂದು ಸಂಶೋಧನೆಗಳಿಂದಲೇ ಸಾಬೀತಾಗಿದೆ. ಒಂದು ವರ್ಷದ ಮೇಲಿನ ಮಕ್ಕಳು ಹಾಗು ವಯಸ್ಕರಿಗೆ ಹಗಲು