ಬೆಂಗಳೂರು: ಸಾಮಾನ್ಯವಾಗಿ ನಾವು ಅಕ್ಕಿ ತೊಳೆದ ನೀರನ್ನು ಗಲೀಜು ಎಂದು ಹೊರಗೆ ಎಸೆಯುತ್ತೇವೆ. ಆದರೆ ಇನ್ನು ಮೇಲೆ ಹಾಗೆ ಮಾಡಬೇಡಿ. ಏಕೆಂದರೆ ಈ ನೀರಿನಿಂದ ನಮಗೆ ಅನೇಕ ಉಪಯೋಗಗಳಿವೆ. ಅಕ್ಕಿ ತೊಳೆದ ನೀರಲ್ಲಿ ಕೂದಲು ತೊಳೆಯುವುದರಿಂದ ಕೂದಲುದುರುವಿಕೆ ನಿಲುತ್ತದೆ.ಯಾಕೆಂದರೆ ಇದರಲ್ಲಿಅಮೈನೊ ಆಸಿಡ್ ಅಂಶಗಳಿರುವುದರಿಂದ ಇದು ಕೂದಲಿನ ಬೇರನ್ನು ಗಟ್ಟಿಯಾಗಿಸುತ್ತದೆ. ಹಾಗೆ ಕೂದಲು ದಪ್ಪವಾಗಿ ಬೆಳೆಯುತ್ತದೆ. ಈ ನೀರು ಚರ್ಮಕ್ಕೆ ತುಂಬಾ ಒಳ್ಳೆಯದು. ಚರ್ಮವನ್ನು ತಂಪುಗೊಳಿಸುವ ಮತ್ತು ಮೃದುಗೊಳಸುವ ಸಾಮರ್ಥ್ಯ ಇದಕ್ಕಿದೆ.