ಸಿಹಿ ಆಹಾರ ಪದಾರ್ಥಗಳು ಮತ್ತು ಜ್ಯೂಸ್ ದೇಹದ ತೂಕ ಹೆಚ್ಚಾಗುವ ಸಾಧ್ಯತೆಗಳನ್ನು ಹೆಚ್ಚಿಸುವ ಮೂಲಕ ಅಧಿಕ ರಕ್ತದೊತ್ತಡ, ಮಧುಮೇಹ ಮೊದಲಾದ ರೋಗಗಳ ಅಪಾಯವನ್ನು ಹೆಚ್ಚು ಮಾಡುತ್ತದೆ. ಇವುಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಸತ್ಯ. ಆದರೆ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆಯೋ ಹಾಗೆಯೇ ವಿಶೇಷವಾಗಿ ವ್ಯಕ್ತಿಗಳ ಲೈಂಗಿಕ ಆರೋಗ್ಯದ ಮೇಲೆ ಸಹ ಸಿಹಿ ಪಾನೀಯಗಳ ಸೇವನೆಯು ಪುರುಷರ ಲೈಂಗಿಕ ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.