ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಏಕಾಂಗಿತನ ಹೇಗೆ ಸಹಕಾರಿ ಗೊತ್ತಾ..?

ಬೆಂಗಳೂರು| Ramya kosira| Last Modified ಶುಕ್ರವಾರ, 8 ಅಕ್ಟೋಬರ್ 2021 (07:08 IST)
ಸಾಮಾನ್ಯವಾಗಿ ಜನರು ಸಾಮಾಜಿಕತೆಯು ಒತ್ತಡವನ್ನು ನಿವಾರಿಸುತ್ತದೆ ಎಂದು ನಂಬಿದ್ದಾರೆ. ಇದರಲ್ಲಿ ಯಾವುದೇ ಹಾನಿಯಿಲ್ಲದಿದ್ದರೂ, ಇತರರೊಂದಿಗೆ ಹೇಗೆ ಸಮಯ ಕಳೆಯಬೇಕು ಮತ್ತು ನಿಮ್ಮ ಜೊತೆಯಲ್ಲಿರುವವರ ಜೊತೆ ಸಂಪೂರ್ಣವಾಗಿ ಆನಂದದಿಂದ ಇರುವುದು ಹೇಗೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು.
Photo Courtesy: Google
ಮಾನಸಿಕ ಆರೋಗ್ಯದಲ್ಲಿ 'ಏಕಾಂಗಿ ಸಮಯ' ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಲಹೆಗಾರ ಮನೋವೈದ್ಯ ಮತ್ತು ಮನೋರೋಗ ತಜ್ಞೆ ಡಾ ರೂಹಿ ಸತಿಜಾ ಹೇಳುತ್ತಾರೆ. ಇತರೆ ಮಂದಿಯೊಂದಿಗೆ ಬೆರೆಯುವುದು ಉತ್ತಮವೇ ಆದರೂ ಇದು ಒತ್ತಡವನ್ನೂ ಸೃಷ್ಟಿಸುತ್ತದೆ. ಜನರು ಏನು ಯೋಚಿಸುತ್ತಾರೆ ಎಂದು ಅದನ್ನೇ ನೀವು ಚಿಂತಿಸುತ್ತೀರಿ. ನಿರಾಕರಣೆ ತಪ್ಪಿಸಲು ಉಳಿದ ಗುಂಪಿನೊಂದಿಗೆ ಹೊಂದಿಕೊಳ್ಳಲು ನಿಮ್ಮ ನಡವಳಿಕೆಯನ್ನು ನೀವು ಬದಲಾಯಿಸುತ್ತೀರಿ” ಎಂದು ಅವರು ಹೇಳುತ್ತಾರೆ. ವೈದ್ಯರ ಪ್ರಕಾರ, 'ಒಂಟಿತನ' ಮತ್ತು 'ಏಕಾಂಗಿತನ' ನಡುವೆ ವ್ಯತ್ಯಾಸವಿದೆ. ಒಂಟಿತನವು ಋಣಾತ್ಮಕವಾಗಿದ್ದು ಮತ್ತು ಯಾವುದು, ಏನು, ಯಾರು ಬೇಡ ಎಂಬ ಭಾವನೆಗಳನ್ನು ಹೊಂದಿರುತ್ತದೆ ಎಂದು ಅವರು ಹೇಳುತ್ತಾರೆ. "ಏಕಾಂಗಿಯಾಗಿರುವುದು ನಿಮ್ಮ ಸ್ವಂತಿಕೆಯ ಜೊತೆ ಹೆಚ್ಚು ಆರಾಮದಾಯಕವಾಗಲು ಸಹಾಯ ಮಾಡುತ್ತದೆ. ನೀವು ಒಬ್ಬರೇ ಇದ್ದಾಗ, ಹೊರಗಿನ ಪ್ರಭಾವವಿಲ್ಲದೆ ನಿಮ್ಮ ಆಯ್ಕೆಗಳನ್ನು ಕಂಡುಕೊಳ್ಳಬಹುದು ಮತ್ತು ನಿಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಒರೆಗೆ ಹಚ್ಚಲು, ಉತ್ತಮವಾಗಿಸಿಕೊಳ್ಳಲು ಅದು ನಿಮಗೆ ಸಹಾಯ ಮಾಡುತ್ತದೆ.> 'ಏಕಾಂಗಿತನ' ನಮ್ಮ ಮಾನಸಿಕ ಸ್ಥಿತಿಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ?> ವೈಯಕ್ತಿಕ ಪರಿಶೋಧನೆ: ನಿಮ್ಮ ಮನಸ್ಸಿನ ಜೊತೆ ಸಮಯ ಕಳೆಯುವುದು ಮತ್ತು ಆರಾಮವಾಗಿರುವುದರಿಂದ ನಿಮ್ಮ ಆಯ್ಕೆಗಳು, ಇಷ್ಟಗಳು ಮತ್ತು ಇಷ್ಟಪಡದಿರುವುದನ್ನು ಅರ್ಥಮಾಡಿಕೊಳ್ಳಲು ಕಾರಣವಾಗುತ್ತದೆ. ನೀವು ಒಂದು ನಿರ್ದಿಷ್ಟ ರೀತಿಯಲ್ಲಿ ಏಕೆ ವರ್ತಿಸುತ್ತೀರಿ ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಸೃಜನಶೀಲತೆ
ಕಾಪಾಡಿಕೊಳ್ಳಲು ಸೃಜನಶೀಲತೆ ಒಂದು ಉತ್ತಮ ಸಾಧನವಾಗಿದೆ. ಒಂದು ಹವ್ಯಾಸದಲ್ಲಿ ಮಗ್ನರಾಗುವುದು ಮತ್ತು ಏನನ್ನಾದರೂ ಕಲಾಕೃತಿಯೋ, ಚಿತ್ರವೋ ಹೀಗೆ ಯಾವುದಾದರೂ ಸೃಜನತ್ಮಕ ಕಾರ್ಯಗಳಲ್ಲಿ ನಿಮ್ಮ ಮನಸ್ಸನ್ನು ಬಳಸುವುದು ಉತ್ತಮ ಮಾರ್ಗವಾಗಿದೆ: ಇದಕ್ಕೆ ಏಕಾಂತ ಮತ್ತು ಸಮಯ ಬೇಕಾಗುತ್ತದೆ, ನೀವು ಯಾವಾಗಲೂ ಜನರ ಮಧ್ಯೆಯೇ ಬದುಕುತ್ತಿದ್ದರೆ ನಿಮ್ಮ ಸೃಜನತೆಯ ಶಕ್ತಿಯನ್ನು ನೀವು ಕಂಡುಕೊಳ್ಳುವುದು ಕಷ್ಟ.
ಸಾಮಾಜಿಕ ಶಕ್ತಿ
 ಕೆಲವೊಮ್ಮೆ ನೀವು ಬೇರೆಯವರ ಅಧೀನದಲ್ಲಿ ಬದುಕಲು ಬಯಸುವುದಿಲ್ಲ. ನೀವು ಒಬ್ಬಂಟಿಯಾಗಿ ವಾಸಿಸುತ್ತಿರುವಾಗ, ಒಬ್ಬರೇ ತಿನ್ನಲು ಹೊರಗೆ ಹೋಗಿ, ಅಥವಾ ನಿಮ್ಮೊಂದಿಗೆ ಸಮಯ ಕಳೆಯಿರಿ, ಈ ರೀತಿಯಿಂದಾಗಿ ನೀವು ಮಾಡುವ ಎಲ್ಲದರ ಮೇಲೆ ನಿಮ್ಮ ನಿಯಂತ್ರಣ ಇರುತ್ತದೆ. ನಿಮ್ಮನ್ನು ನಿರ್ಣಯಿಸುವವರು, ಏನು ಮಾಡಬೇಕೆಂದು ನಿಮಗೆ ಹೇಳುವವರು ಯಾರೂ ಇರುವುದಿಲ್ಲ., ಸಾಮಾಜಿಕ ಶಕ್ತಿ, ನಿಮ್ಮಲ್ಲಿನ ಶಕ್ತಿಯು ನಕಾರಾತ್ಮಕತೆಯನ್ನು ಕಡಿಮೆ ಮಾಡಿ ಹೆಚ್ಚು ಸಕಾರಾತ್ಮಕತೆಗೆ ಕೊಂಡೊಯ್ಯುತ್ತದೆ.
ಸಬಲೀಕರಣದ ಪ್ರಜ್ಞೆ
ನಿಮ್ಮ ಹೊಸ ಸ್ವಾತಂತ್ರ್ಯ ನಿಮ್ಮ ಸಬಲಲತೆಯ ಜ್ಞಾನವನ್ನು ಎಚ್ಚರಿಸುತ್ತದೆ. ನೀವು ವಿಶ್ರಾಂತಿ ಪಡೆಯಲು ಮತ್ತು ನಿಮ್ಮ ಹೊಸ ಸ್ವಾತಂತ್ರ್ಯ ಅನುಭವಿಸಲು ನೀವು ಒಬ್ಬಂಟಿಯಾಗಿರುವಾಗ ಹೇಗೆ ಸುರಕ್ಷಿತವಾಗಿರಬೇಕು ಎಂಬುದನ್ನು ಅರಿತುಕೊಳ್ಳಿ.
ಸಾಮಾಜಿಕ ಮತ್ತು ಸಮಾಜ ವಿರೋಧಿ
 ವೈದ್ಯರು ಸಾಮಾಜಿಕ ಮತ್ತು ಸಮಾಜ ವಿರೋಧಿಗಳ ನಡುವಿನ ವ್ಯತ್ಯಾಸವನ್ನು ಮತ್ತಷ್ಟು ವಿವರಿಸುತ್ತಾರೆ. "ಸಮಾಜ ವಿರೋಧಿ ನಡವಳಿಕೆ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಇದು ಆತಂಕ ಅಥವಾ ಖಿನ್ನತೆಯ ಲಕ್ಷಣವಾಗಿರಬಹುದು.
 ಇದರಲ್ಲಿ ಇನ್ನಷ್ಟು ಓದಿ :