ಬೆಂಗಳೂರು : ಅರಶಿನ ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಅತಿಯಾಗಿ ಸೇವಿಸಿದರೆ ಅಮೃತವೂ ವಿಷ ಎಂಬಂತೆ ಅರಶಿನವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಮಾತ್ರ ಅದು ಆರೋಗ್ಯಕ್ಕೆ ಉಪಯೋಗಕಾರಿಯಾಗಿದೆ. ಇಲ್ಲವಾದರೆ ಅದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅರಿಶಿನದಲ್ಲಿರುವ ಕುರ್ಕ್ಯುಮಿನ್ ಎಂಬ ಮೂಲಭೂತ ಅಂಶವೇ ಅರಿಶಿನದ ಔಷಧೀಯ ಗುಣಕ್ಕೆ ಪ್ರಮುಖ ಕಾರಣವಾಗಿದೆ. ಇದನ್ನು ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದನ್ನು ತಿಳಿದುಕೊಂಡಿರಬೇಕು. ಇಲ್ಲವಾದಲ್ಲಿ ದುಷ್ಪರಿಣಾಮ ಬೀರುವ