ಬೆಂಗಳೂರು : ಪ್ರತಿಯೊಬ್ಬ ಮನುಷ್ಯನಿಗೂ ಗಾಳಿ, ನೀರು, ಆಹಾರದ ಜೊತೆಗೆ ನಿದ್ದೆ ಕೂಡ ಅತ್ಯವಶ್ಯಕ. ಕೆಲಸ ಕಾರ್ಯಗಳನ್ನು ಸರಿಯಾಗಿ ನಡೆಸಿಕೊಂಡು ಹೋಗಲು ನಿದ್ದೆ, ವಿಶ್ರಾಂತಿ ತುಂಬಾ ಸಹಾಯಕವಾಗಿದೆ. ನಿದ್ದೆಯಲ್ಲಿ ಹೆಚ್ಚು ಕಡಿಮೆಯಾದರೆ ಮನುಷ್ಯನಲ್ಲಿ ಆರೋಗ್ಯದ ಸಮಸ್ಯೆ ಕಾಡುತ್ತದೆ. ಅವರವರ ವಯಸ್ಸಿಗೆ ತಕ್ಕಂತೆ ಎಷ್ಟು ಕಾಲ ನಿದ್ದೆ ಮಾಡಬೇಕು ಎಂಬುದರ ಬಗ್ಗೆ ಎಲ್ಲರೂ ತಿಳಿಯಬೇಕು. ತಜ್ಞರ ಪ್ರಕಾರ ನವಜಾತ ಶಿಶು ಮೂರು ತಿಂಗಳವರೆಗೆ ದಿನಕ್ಕೆ 14 ರಿಂದ 17 ಗಂಟೆಗಳ ಕಾಲ