ಬೆಂಗಳೂರು : ಮಕ್ಕಳಿಗೆ ಎಳವೆಯಲ್ಲಿಯೇ ಆತ್ಮಗೌರವದ ಪಾಠವನ್ನು ಹೇಳಿಕೊಟ್ಟರೆ ಅವರು ಮುಂದೆ ಉತ್ತಮ ನಡವಳಿಕೆ ಹೊಂದಿರುವ ವ್ಯಕ್ತಿಯಾಗಿ ಬೆಳೆಯುತ್ತಾರೆ. ಆದ್ದರಿಂದ ಮಕ್ಕಳಲ್ಲಿ ಯಾವಾಗ ಮತ್ತು ಯಾವ ರೀತಿಯಲ್ಲಿ ಆತ್ಮಗೌರವವನ್ನು ಬೆಳೆಸಬೇಕು ಎಂದು ತಿಳಿದುಕೊಳ್ಳುವುದು ಅತಿ ಅಗತ್ಯ. ಇಂತಹ ವಿಷಯಗಳನ್ನು ಜಾಗ್ರತೆಯಿಂದ ನಿಭಾಯಿಸಬೇಕು. ಮಕ್ಕಳನ್ನು ಮಾತನಾಡಲು ಬಿಡಿ:- ಮಕ್ಕಳು ಏನನ್ನಾದರೂ ಹೇಳಲು ಪ್ರಯತ್ನಿಸಿದರೆ ನೀವು ಅವರನ್ನು ಸುಮ್ಮನಿರುವಂತೆ ಹೇಳಬೇಡಿ. ಅವರ ಮಾತುಗಳನ್ನು ತಾಳ್ಮೆಯಿಂದ ಕೇಳಿ ಹಾಗೂ ಅವರು ಹೇಳುವ ವಿಷಯಗಳತ್ತ ಆಸಕ್ತಿ