ಬೆಂಗಳೂರು: ಸಾಯಂಕಾಲವಾದರೆ ಸಾಕು ಎಲ್ಲಿಲ್ಲದ ಸೊಳ್ಳೆಗಳು ಬಂದು ಮನೆಯ ಮೇಲೆ ದಾಳಿ ಮಾಡುತ್ತವೆ. ಈ ಸೊಳ್ಳೆಗಳ ಕಡಿತದಿಂದ ಡೆಂಗ್ಯು, ಮಲೇರಿಯಾ. ಚಿಕನಗುನ್ಯಾ ಹೀಗೆ ಅನೇಕ ಕಾಯಿಲೆಗಳು ಬರುತ್ತದೆ. ಸೊಳ್ಳೆಗಳ ನಿವಾರಣಿಗೆ ಮಸ್ಕಿಟೋ ಕಾಯಿಲ್ ಗಳನ್ನು ಬಳಸುತ್ತಾರೆ. ಆದರೆ ಅದರ ವಾಸನೆ ನಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ. ಆದ್ದರಿಂದ ಯಾವುದೇ ಸೈಡ್ ಎಫೆಕ್ಟ ಇಲ್ಲದೆ ಸೊಳ್ಳೆಯ ಸಮಸ್ಯೆಯಿಂದ ಹೇಗೆ ದೂರವಾಗಬಹುದು ಎಂದು ನೋಡೋಣ.