ಬೆಂಗಳೂರು : ಸಕ್ಕರೆ ತಿನ್ನಲು ಸಿಹಿಯಾಗಿರುತ್ತದೆ. ಇದರಿಂದ ಅನೇಕ ವಿಧದ ಸಿಹಿತಿಂಡಿಗಳನ್ನು ಮಾಡಬಹುದು. ಅಷ್ಟೇ ಅಲ್ಲ ಇದರಿಂದ ತಲೆಯ ಹೊಟ್ಟನ್ನು ಕೂಡ ನಿವಾರಿಸಬಹುದು. *ಸ್ವಲ್ಪ ಸಕ್ಕರೆ, ಆಲಿವ್ ತೈಲ ಮತ್ತು ಒಂದು ಚಿಟಿಕೆ ಉಪ್ಪು ಜತೆ ಸೇರಿಸಿ ಸ್ಕ್ರಬ್ ಮಾಡಿ. ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು ಬೆರಳುಗಳನ್ನು ಬಳಸಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಹಾಗೆ ಬಿಡಿ. ಇದರ ಬಳಿಕ ನೀರಿನಿಂದ ತೊಳೆಯಿರಿ.