ನಮ್ಮ ದೈನಂದಿನ ವಿದ್ಯಮಾನದಲ್ಲಿ ಬಳಕೆಯಾಗುವ ವಸ್ತುಗಳಲ್ಲಿ ನಿಂಬೆಯೂ ಒಂದು. ನಿಂಬೆಯನ್ನು ನಾವು ಹಣ್ಣು ಎಂದೂ ಒಂದು ಬಗೆಯ ತರಕಾರಿ ಎಂದೂ ಹೇಳಬಹುದು.ನಿಂಬೆಯಲ್ಲಿ ಸಿ ಜೀವಸತ್ವವಿರುವುದರಿಂದ ಇದನ್ನು ಸಿಟ್ರಸ್ ಹಣ್ಣುಗಳ ಸಾಲಿನಲ್ಲಿ ಸೇರಿಸಲಾಗಿದೆ. ನಿಂಬೆಯು ಲೆಮೆನ್ಸ ರುಟೇಶೀಯಾ ಕುಟುಂಬಕ್ಕೆ ಸೇರಿದ್ದು, ಏಷ್ಯಾದ ನಿತ್ಯಹರಿದ್ವರ್ಣ ಪ್ರದೇಶದಲ್ಲಿ ವ್ಯಾಪಕವಾಗಿ ಕಂಡುಬರುತ್ತಿದೆ. ನಿಂಬೆಯ ಒಳಭಾಗವು ಹುಳಿಯಾಗಿದ್ದು, ಅದರ ಉಲ್ಲಾಸಕರವಾದ ವಾಸನೆಯಿಂದಾಗಿ ಮತ್ತು ಟಾರ್ಟ್ ಪರಿಮಳದ ಕಾರಣದಿಂದಾಗಿ ಇತರ ಪದಾರ್ಥಗಳು ಮತ್ತು ಭಕ್ಷ್ಯಗಳಿಗೆ ರುಚಿ ಸೇರಿಸಲು ಸಾಮಾನ್ಯವಾಗಿ