ಹಣ್ಣುಗಳ ಸೇವನೆಯ ಅಭ್ಯಾಸದಿಂದ ನಮ್ಮ ದೇಹಕ್ಕೆ ತರಕಾರಿಗಳನ್ನು ತಿಂದಾಗ ಸಿಗದ ಎಷ್ಟೋ ಪೋಷಕಾಂಶಗಳು ದೊರಕುತ್ತವೆ. ಅಂತಹ ಹಣ್ಣುಗಳ ಪಟ್ಟಿಗೆ ಕಪ್ಪು ದ್ರಾಕ್ಷಿ ಸೇರುತ್ತದೆ. ಕಪ್ಪು ದ್ರಾಕ್ಷಿಯು ಕೊಂಚ ಹುಳಿಯೇ ಆದರೂ ಅದರ ಗಾಢ ಬಣ್ಣ ಹಾಗೂ ಇದರಲ್ಲಿರುವ ಪೋಷಕಾಂಶಗಳು ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತವೆ. * ದೃಷ್ಟಿ ಮತ್ತು ಮೆಮೊರೆ ಸುಧಾರಣೆಗೆ ದ್ರಾಕ್ಷಿ ಹಣ್ಣು ಸಹಾಯ ಮಾಡುತ್ತದೆ. * ಕಪ್ಪು ದ್ರಾಕ್ಷಿಯ ಸೇವನೆಯಿಂದ ಮಧುಮೇಹವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.