ಬೆಂಗಳೂರು : ತಮಿಳಿನಲ್ಲಿ ಅವಲ್, ಕನ್ನಡದಲ್ಲಿ ಅವಲಕ್ಕಿ, ಭೋಜಪುರಿ ಭಾಷೆಯಲ್ಲಿ ಚಿವುರಾ, ಒರಿಯಾದಲ್ಲಿ ಚೂಡ ಎಂದು ಕರೆಯಲ್ಪಡುವ ಬೆಳಗಿನ ಉಪಾಹಾರದ ಜನಪ್ರಿಯ ತಿಂಡಿಯಾಗಿರುವ ಅವಲಕ್ಕಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ವೈಜ್ಞಾನಿಕ ವರದಿಗಳು ಹೇಳುತ್ತವೆ. ಆರೋಗ್ಯಕರ ಡಯೆಟ್ ಪಾಲನೆ ಮಾಡಬೇಕು ಎಂದು ಬಯಸುವವರು ಬೆಳಗಿನ ತಿಂಡಿಗೆ ಅವಲಕ್ಕಿ ತಿನ್ನುವುದನ್ನು ರೂಡಿ ಮಾಡಿಕೊಳ್ಳಿ. ಯಾಕೆಂದರೆ ಇದು ಕಾರ್ಬೋಹೈಡ್ರೇಟ್ಗಳ ಆಗರ. ಇದರಲ್ಲಿ ಕಬ್ಬಿಣದ ಅಂಶ, ಫೈಬರ್, ಆಯಂಟಿ ಆಕ್ಸಿಡೆಂಟ್ ಹಾಗೂ ದೇಹಕ್ಕೆ ಬೇಕಾದ