ಪಾಲಾಕ್ ಸೊಪ್ಪನ್ನು ವಾರಕ್ಕೆ 3 ಬಾರಿ ಸೇವನೆ ಮಾಡಿದರೆ ಏನಾಗುತ್ತದೆ ಗೊತ್ತಾ?

ಬೆಂಗಳೂರು| pavithra| Last Modified ಶನಿವಾರ, 9 ಜನವರಿ 2021 (07:30 IST)
ಬೆಂಗಳೂರು : ಪಾಲಾಕ್ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣಾಂಶವಿದ್ದು, ಇದು  ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ. ಅಲ್ಲದೇ ಇದರಿಂದ ನಿಮ್ಮ ಕೂದಲು ಮತ್ತು ಚರ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಪಾಲಾಕ್ ಸೊಪ್ಪನ್ನು ವಾರಕ್ಕೆ 3 ಬಾರಿ ಸೇವನೆ ಮಾಡುವುದರಿಂದ ಮತ್ತುವೃದ್ಧಿಯಾಗುತ್ತದೆ. ಇದು ಕೂದಲಿಗೆ ಆಮ್ಲಜನಕವನ್ನು ತಲುಪಿಸಲು ಸಹಾಯ ಮಾಡುತ್ತದೆ. ಇದು ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.

ಇದರಲ್ಲಿ ವಿಟಮಿನ್ ಕೆ ಇದ್ದು, ಇದು ಬಿಸಿಲಿನಿಂದ ಕಪ್ಪಗಾಗಿರುವ ಚರ್ಮವನ್ನು ಸಹಜ ಬಣ್ಣಕ್ಕೆ ತರುವಲ್ಲಿ ನೆರವಾಗುತ್ತದೆ. ಇದು ಮುಖದ ಮೇಲಿನ ಕಪ್ಪು ಕಲೆಗಳನ್ನು ನಿವಾರಿಸುತ್ತದೆ. ಇದು ಸೋರಿಯಾಸಿಸ್, ತುರಿಕೆ, ಮತ್ತು ಒಣ ಚರ್ಮದ ಸಮಸ್ಯೆಯನ್ನು ತಡೆಯುತ್ತದೆ.ಇದರಲ್ಲಿ ಇನ್ನಷ್ಟು ಓದಿ :