ಬೇಸಿಗೆಯಲ್ಲಿ ಶುಂಠಿಯನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ ಗೊತ್ತಾ?

ಬೆಂಗಳೂರು| pavithra| Last Modified ಸೋಮವಾರ, 19 ಏಪ್ರಿಲ್ 2021 (06:52 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾದ ಹಿನ್ನಲೆಯಲ್ಲಿ ಹೆಚ್ಚಿನವರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಶುಂಠಿಯನ್ನು ಅತಿಯಾಗಿ ಸೇವಿಸುತ್ತಾರೆ. ಆದರೆ ಬೇಸಿಗೆಯಲ್ಲಿ ವಾತಾವರಣದಲ್ಲಿ ಶಾಖ ಹೆಚ್ಚಾಗಿದ್ದರಿಂದ ಶುಂಠಿಯನ್ನು ಅತಿಯಾಗಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಕಾರಕ.

*ಶುಂಠಿಯನ್ನು ಬೇಸಿಗೆಯಲ್ಲಿ ಅತಿಯಾಗಿ ಸೇವಿಸಿದರೆ ಎದೆಯುರಿ ಸಮಸ್ಯೆ ಕಾಡುತ್ತದೆ. ಎದೆಯಲ್ಲಿ ಸುಡುವ ಸಂವೇದನೆ ಕಂಡುಬರುತ್ತದೆ.

*ಶುಂಠಿಯನ್ನು ಗರ್ಭಿಣಿಯರು ಸೇವಿಸುವುದು ಅಪಾಯ. ಇದು ಗರ್ಭಕೋಶದ ಸಂಕೋಚನೆಗೆ ಕಾರಣವಾಗಿ ರಕ್ತಸ್ರಾವವನ್ನು ಹೆಚ್ಚಿಸುತ್ತದೆ. ಇದರಿಂದ  ಗರ್ಭಪಾತವಾಗುವ ಸಂಭವವಿದೆ. 

*ಶುಂಠಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಮಧುಮೇಹಿಗಳು ಇದನ್ನು ಸೇವಿಸಬಾರದು. ಇದು ಔಷಧದ ಪರಿಣಾಮವನ್ನು ಕಡಿಮೆ ಮಾಡುತ್ತದೆ.

*ಶುಂಠಿ ರಕ್ತವನ್ನು ತೆಳ್ಳಗೆ ಮಾಡುತ್ತದೆ. ಇದರಿಂದ ನಿಮ್ಮಲ್ಲಿ ರಕ್ತದೊತ್ತಡ ಅಧಿಕವಾಗುತ್ತದೆ. ಹಾಗಾಗಿ ಬಿಪಿ ಇರುವವರು ಇದನ್ನು ಸೇವಿಸಬೇಡಿ.

*ಕೂದಲುದುರುವ ಸಮಸ್ಯೆ ಇರುವವರು ಶುಂಠಿಯನ್ನು ಸೇವಿಸಬೇಡಿ. ಇದು ಕೂದಲು ಮತ್ತಷ್ಟು ಉದುರುವಂತೆ ಮಾಡುತ್ತದೆ.



ಇದರಲ್ಲಿ ಇನ್ನಷ್ಟು ಓದಿ :