ಬೇವಿನ ಎಣ್ಣೆಯನ್ನು ಕೂದಲಿಗೆ ಬಳಸಿದರೆ ಏನಾಗುತ್ತದೆ ಗೊತ್ತಾ?

ಬೆಂಗಳೂರು| pavithra| Last Modified ಮಂಗಳವಾರ, 6 ಏಪ್ರಿಲ್ 2021 (08:04 IST)
ಬೆಂಗಳೂರು : ಬೇವು ಒಂದು ನೈಸರ್ಗಿಕವಾದ ಔಷಧಿ ಸಸ್ಯ. ಈ ಸಸ್ಯದ ಎಲ್ಲಾ ಭಾಗಗಳು  ಅನೇಕ ರೋಗಗಳಿಗೆ ಉಪಯುಕ್ತವಾಗಿದೆ. ಇದು ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ ಫಂಗಲ್ ಗುಣಗಳನ್ನು ಹೊಂದಿದ್ದು, ಹಲವು ರೋಗಗಳನ್ನು ನಿವಾರಿಸುತ್ತದೆ. ಹಾಗಾದ್ರೆ ಬೇವಿನ ಎಣ್ಣೆಯನ್ನು ಕೂದಲಿಗೆ ಬಳಸಿದರೆ ಏನಾಗುತ್ತದೆ ಎಂಬುದನ್ನು ತಿಳಿದು‍ಕೊಳ್ಳೋಣ.

*ಬೇವಿನ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಒಣ, ಶುಷ್ಕ, ಮತ್ತು ನಿರ್ಜೀವ ಕೂದಲು ಮೃದುಗೊಳ್ಳುತ್ತದೆ.

*ಕೂದಲಿಗೆ ಬೇವಿನ ಎಣ್ಣೆ ಹಾಕಿ ಮಸಾಜ್ ಮಾಡುವುದರಿಂದ ತಲೆಹೊಟ್ಟು ಮತ್ತು ಕೂದಲುದುರುವಿಕೆಯ ಸಮಸ್ಯೆ ನಿವಾರಣೆಯಾಗುತ್ತದೆ.

*ಕೂದಲಿಗೆ ಬೇವಿನ ಎಣ್ಣೆ ಬಳಸುವುದರಿಂದ ತಲೆಯಲ್ಲಿ ಹೇನುಗಳಿದ್ದರೆ ನಿವಾರಣೆಯಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :