ಬೆಂಗಳೂರು : ಸಿಹಿ ಪದಾರ್ಥಗಳನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಿಳಿದರೂ ಕೂಡ ಕೆಲವರು ಬಾಯಿ ಚಪಲಕ್ಕೆ ತಿಂದು ಬಿಡುತ್ತಾರೆ. ಈ ಬಯಕೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಯಾಕೆಂದರೆ ಇದು ನಿಮ್ಮ ತಪ್ಪಲ್ಲ, ಇದಕ್ಕೆ ನಿಮ್ಮ ಲಿವರ್ ಉತ್ಪತ್ತಿ ಮಾಡುತ್ತಿರುವ ಹಾರ್ಮೋನ್ ಒಂದು ಕಾರಣ ಎಂಬುದಾಗಿ ಸಂಶೋಧನೆಯೊಂದು ತಿಳಿಸಿದೆ. ಕೋಪನ್ಹೇಗನ್ನ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಸಂಶೋಧನೆಯು FGF21 ಜೀನ್ (ಹಾರ್ಮೋನ್) ಇರುವ ವ್ಯಕ್ತಿಗಳಿಗೆ ಸಿಹಿ ತಿನ್ನುವ ಬಯಕೆಯನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ.