ಬೆಂಗಳೂರು: ಕೆಲವರಿಗೆ ಪ್ರಯಾಣ ಮಾಡುವಾಗ ವಾಕರಿಕೆ ಬರುವ ಸಮಸ್ಯೆ. ಇದರಿಂದ ಅವರಿಗೆ ಮಾತ್ರವಲ್ಲ, ಜತೆಯಲ್ಲಿರುವವರಿಗೂ ಕಿರಿ ಕಿರಿ. ಇದರಿಂದ ಮುಕ್ತರಾಗುವುದು ಹೇಗೆ?ವಾಂತಿ ಬರುವುದಕ್ಕೆ ಹಲವು ಕಾರಣಗಳಿರಬಹುದು. ಒಂದು ವೇಳೆ ಆಹಾರ ಸೇವಿಸಿದ ತಕ್ಷಣ ಪ್ರಯಾಣ ಮಾಡುವುದರಿಂದ ಹೊಟ್ಟೆ ತೊಳೆಸಿದಂತಾಗುವುದಿದ್ದರೆ, ಖಾಲಿ ಹೊಟ್ಟೆಯಲ್ಲಿ ಪ್ರಯಾಣ ಮಾಡಿ. ಪ್ರಯಾಣಕ್ಕೂ ಮೊದಲೇ ಆದಷ್ಟು ಹಣ್ಣು, ತರಕಾರಿ, ನೀರಿನಂಶ ಸೇವಿಸಿ. ತಪ್ಪಿಯೂ ಮಸಾಲೆ ಪದಾರ್ಥಗಳನ್ನು ಸೇವಿಸಬೇಡಿ.ಆದಷ್ಟು ವಾಹನ ಮುಂಬಾಗ ಕೂರಿ. ಹಿಂಭಾಗದಲ್ಲಿ ಜಂಪ್ ಆಗುವುದು ಜಾಸ್ತಿ.