ಬೆಂಗಳೂರು : ಬಂಜೆತನವು ಮಹಿಳೆಯರನ್ನು ಮಾತ್ರ ಕಾಡುತ್ತದೆ ಎಂಬುದು ತಪ್ಪುಕಲ್ಪನೆ. ಪುರುಷರಲ್ಲಿಯೂ ಬಂಜೆತನದ ಸಮಸ್ಯೆ ಕಾಡುತ್ತದೆ. ಹಾಗೇ ಪುರುಷರ ಬಂಜೆತನಕ್ಕೆ ಬೊಜ್ಜು ಕೂಡ ಒಂದು ಕಾರಣವಾಗಬಲ್ಲುದು. ತಜ್ಞರ ಪ್ರಕಾರ ಬಂಜೆತನವಿರುವ ದಂಪತಿಯಲ್ಲಿ ಶೇ.೪೦- ೪೫ರಷ್ಟು ಸಮಸ್ಯೆಯು ಪುರುಷರಲ್ಲಿ ಕಂಡುಬರುತ್ತದೆ. ಪುರುಷರ ಪ್ರಜನನ ಸಾಮರ್ಥ್ಯವನ್ನು ಬೊಜ್ಜು ಹಲವು ರೀತಿಯಲ್ಲಿ ಬಾಧಿಸುತ್ತದೆ. ಇದು ದೈಹಿಕ ವಂಶವಾಹಿ ಸಂಬಂಧಿತ ಅಥವಾ ಹಾರ್ಮೋನು ಸಮಸ್ಯೆಯ ರೂಪದಲ್ಲಿ ಕಾಡಬಹುದು. ದೈಹಿಕವಾಗಿ ಇದು ನಿಮಿರುವಿಕೆ ದೌರ್ಬಲ್ಯ ಸಮಸ್ಯೆ ಅಥವಾ