ಬೆಂಗಳೂರು: ಮಕ್ಕಳು ಹೇಳಿದ ಮಾತು ಕೇಳದಿದ್ದಾಗ, ಎದುರುತ್ತರ ನೀಡಿದಾಗ, ಸುಳ್ಳು ಹೇಳುವಾಗ, ತಪ್ಪೇನಾದರೂ ಮಾಡಿದರೆ ಮಕ್ಕಳಿಗೆ ಬುದ್ಧಿ ಕಲಿಸಲು ಪೋಷಕರು ಅನುಸರಿಸುವ ಮಾರ್ಗವೆಂದರೆ ಹೊಡೆಯುವುದು. ಮಕ್ಕಳಿಗೆ ಹೇಳಿದ ತಕ್ಷಣ ಮಕ್ಕಳಿಗೆ ಬುದ್ಧಿ ಬರುತ್ತದೆ ಎಂದು ನೀವೆಂದುಕೊಂಡಿದ್ದರೆ ಅದು ತಪ್ಪು ಕಲ್ಪನೆ. ನೀವು ಹೊಡೆದಷ್ಟು ಮಕ್ಕಳ ವರ್ತನೆ ಮತ್ತಷ್ಟು ಕೆಡುತ್ತದೆ. ಮಕ್ಕಳು ತಪ್ಪು ಮಾಡಿದಾಗ ಕೋಪ ಬರುವುದು ಸಹಜ, ಆದರೆ ನಿಮ್ಮ ಕೋಪವನ್ನು ಕಂಟ್ರೋಲ್ ಮಾಡಿ ಅವರ ತಪ್ಪುಗಳನ್ನು ಮನವರಿಕೆ ಮಾಡಿ.