ಬೆಂಗಳೂರು: ಊಟವಾದ ತಕ್ಷಣ ಹಣ್ಣು ಸೇವಿಸುವುದು ಅಥವಾ ಹಾಯಾಗಿ ಮಲಗಿ ನಿದ್ರೆ ಮಾಡುವುದನ್ನು ಹಲವರು ರೂಢಿಸಿಕೊಂಡಿದ್ದಾರೆ. ಆದರೆ ಇವೆರಡೂ ನಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹೇಗೆ? ನೋಡೋಣ. ಹಣ್ಣು ಸೇವನೆ ಊಟವಾದ ಬಳಿಕ ಹಣ್ಣು ಸೇವಿಸುವುದು ನಾವೆಲ್ಲರೂ ಮಾಡುವ ತಪ್ಪು. ಹೊಟ್ಟೆ ತುಂಬಾ ಊಟ ಮಾಡಿದ ಮೇಲೆ ಹಣ್ಣು ಸೇವಿಸಿದರೆ ಅದೊಂಥರಾ ಕಲಸು ಮೇಲೋಗರದಂತೆ. ಊಟ ಮತ್ತು ಹಣ್ಣು ಎರಡೂ ಸರಿಯಾಗಿ ಜೀರ್ಣವಾಗದೇ ಅಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರಬಹುದು.