ಬೆಂಗಳೂರು: ರಜೆಯಲ್ಲಿ ಮಕ್ಕಳ ಜತೆ ಮಜಾ ಮಾಡಲು ಹೊರಗಡೆ ಸುತ್ತಾಡುತ್ತೀರಿ. ಮೊದಲೇ ಬೇಸಿಗೆ ಬೇರೆ. ಬಳಲಿ ಬೆಂಡಾದಾಗ ಕಣ್ಣಿಗೆ ಕಾಣುವ ಬಣ್ಣದ ತಂಪು ಪಾನೀಯಗಳು ಸೆಳೆಯುತ್ತವೆ. ಆದರೆ ಎಚ್ಚರವಿರಲಿ. ಸೋಡಾ ಮತ್ತು ಕಾರ್ಬೋನೇಟ್ ಅಂಶವಿರುವ ಪಾನೀಯಗಳನ್ನು ನಿಮ್ಮ ಮಕ್ಕಳಿಗೆ ಯಾವುದೇ ಕಾರಣಕ್ಕೂ ನೀಡಬೇಡಿ. ಅದರಿಂದ ಬಾಯಾರಿಕೆ ನೀಗುವುದಕ್ಕಿಂತ ಅನಾಹುತವಾಗುವುದೇ ಹೆಚ್ಚು.ಇಂತಹ ಪಾನೀಯಗಳನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ, ಬೊಜ್ಜು, ಮಧುಮೇಹ, ಸ್ವಭಾವದಲ್ಲಿ ಏರುಪೇರಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ. ಇಂತಹ ಪಾನೀಯಗಳಲ್ಲಿ