ಬೆಂಗಳೂರು: ಸಾಮಾನ್ಯವಾಗಿ ರಾತ್ರಿ ಮಿಕ್ಕಿದ ಅನ್ನವನ್ನು ನಾವು ಕಸದ ಬುಟ್ಟಿಗೆ ಸೇರಿಸುವುದಿಲ್ಲ. ಅನ್ನ ದುಬಾರಿಯಾಗಿರುವ ಈ ಕಾಲದಲ್ಲಿ ಅದನ್ನು ಬಿಸಿ ಮಾಡಿಯೋ, ಚಿತ್ರಾನ್ನ ಮಾಡಿಯೋ ಮರಳಿ ಉಪಯೋಗಿಸುತ್ತೇವೆ.ಆದರೆ ಆಹಾರ ಗುಣಮಟ್ಟ ಇಲಾಖೆಯ ತಜ್ಞರ ಪ್ರಕಾರ ಹೀಗೆ ಮಾಡಲೇಬಾರದಂತೆ. ಅಂದರೆ ಮಿಕ್ಕಿದ ಅನ್ನವನ್ನು ಬಿಸಿ ಮಾಡಿ ಬಳಸಬಾರದು ಎಂದಿದ್ದಾರೆ ತಜ್ಞರು. ಇದು ರೋಗಗಳಿಗೆ ದಾರಿ ಮಾಡಿಕೊಟ್ಟಂತೆ ಎನ್ನುವುದು ಇಲಾಖೆಯ ಅಭಿಪ್ರಾಯ.ಮಿಕ್ಕಿದ ಅನ್ನದಲ್ಲಿರುವ ಬ್ಯಾಸಿಲ್ಲಾ ಸಿರಸ್ ಎನ್ನುವ ಬ್ಯಾಕ್ಟೀರಿಯಾದಿಂದಾಗಿ ಅದನ್ನು ಬಿಸಿ ಮಾಡಿ