ಬೆಂಗಳೂರು: ಪಪ್ಪಾಯಿ ಹಣ್ಣು ತಿನ್ನಲು ಇಷ್ಟಪಡುತ್ತೇವೆ. ಆದರೆ ಹಣ್ಣು ತಿಂದಾದ ಮೇಲೆ ಬೀಜವನ್ನು ಕಸದ ಬುಟ್ಟಿಗೆ ಸೇರಿಸುತ್ತೇವೆ. ವಿಚಿತ್ರವಾದರೂ ಸತ್ಯ. ನಾವು ಕಸದ ಬುಟ್ಟಿಗೆ ಸೇರಿಸುವ ಇಂತಹ ಹಲವು ಆಹಾರ ವಸ್ತುಗಳಲ್ಲೇ ಹೆಚ್ಚಿನ ಪೋಷಕಾಂಶ ಇರುವುದು.ಪಪ್ಪಾಯಿ ಬೀಜದಲ್ಲೂ ಹಲವು ಆರೋಗ್ಯಕರ ಅಂಶಗಳಿವೆ. ಇದರ ಬೀಜ ಸ್ವಲ್ಪ ಒಗರು ಎನಿಸಿದರೆ ಸಕ್ಕರೆ ಜತೆ ಸೇವಿಸಬಹುದು. ಇದರ ಉಪಯೋಗಗಳನ್ನುತಿಳಿದುಕೊಳ್ಳೋಣ.ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ಹೊಟ್ಟೆಯಲ್ಲಿ ಜಂತು ನಿವಾರಣೆಗೆ ಪಪ್ಪಾಯಿ ಬೀಜಗಳು ರಾಮಬಾಣದಂತೆ ಕೆಲಸ ಮಾಡುತ್ತದೆ.