ಬೆಂಗಳೂರು: ಕೆಲವರು ಅತ್ತೆ-ಮಾವನ ಜತೆಗೆ ಒಂದೇ ಮನೆಯಲ್ಲಿರಲು ಇಷ್ಟಪಡುವುದಿಲ್ಲ. ಇದಕ್ಕೆ ಸಮಾಜ ನೇರವಾಗಿ ಸೊಸೆಯಾದವಳನ್ನೇ ದೂಷಿಸುವುದು ಸಾಮಾನ್ಯವಾಗಿದೆ. ಆದರೆ ಕೆಲವೊಮ್ಮೆ ಇದಕ್ಕೆ ಅತ್ತೆ-ಮಾವನಲ್ಲೂ ದೋಷವಿರಬಹುದು.ಮದುವೆಯಾಗಿ ಮನೆಗೆ ಬರುವ ಹೆಣ್ಣು ಅತ್ತೆ ಮಾವನೂ ತನ್ನ ತಂದೆ ತಾಯಿಯಂತೆ ಸ್ವತಂತ್ರವಾಗಿರಲು ಬಿಡಬೇಕೆಂದು ಬಯಸುತ್ತಾಳೆ. ಇಂದಿನ ಕಾಲದಲ್ಲಿ ಅದು ಸಹಜ ಕೂಡಾ. ಆದರೆ ಕೆಲವೊಮ್ಮೆ ಜನರೇಷನ್ ಗ್ಯಾಪ್ ಪ್ರಭಾವವೋ, ತಮ್ಮ ಕಾಲಕ್ಕೆ ಯೋಚಿಸುವ ಗುಣ ಹೊಂದಿರುವ ಕಾರಣಕ್ಕೋ ಅತ್ತೆ-ಮಾವನಿಗೂ ಸೊಸೆಯ ಮೇಲೆ ಹಿಡಿತ ಸಾಧಿಸಲು